Ration Card: ಈ ರಾಜ್ಯದಲ್ಲಿ ಪಡಿತರ ಚೀಟಿ ಇಲ್ಲದಿದ್ದರೂ ರೇಷನ್ ನೀಡುತ್ತಿದೆ ಸರ್ಕಾರ

Government Initiative: ರಾಷ್ಟ್ರ ರಾಜಧಾನಿಯಲ್ಲಿ ಹೊಸ ಯೋಜನೆಯಡಿ ಪಡಿತರ ಚೀಟಿ ಹೊಂದಿಲ್ಲದ 4.5 ಲಕ್ಷಕ್ಕೂ ಹೆಚ್ಚು ಜನರಿಗೆ ಆಹಾರ ಧಾನ್ಯಗಳನ್ನು ಒದಗಗಿಸಲಾಗುತ್ತಿದೆ.

Written by - Yashaswini V | Last Updated : Jun 16, 2021, 10:10 AM IST
  • ಪಡಿತರ ಚೀಟಿ ಹೊಂದಿಲ್ಲದವರಿಗೆ ಈ ರಾಜ್ಯ ಸರ್ಕಾರದ ವತಿಯಿಂದ 4 ಕೆಜಿ ಗೋಧಿ ಮತ್ತು 1 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ
  • ಈ ಯೋಜನೆಯು ಅಸಂಘಟಿತ ಕಾರ್ಮಿಕರು, ವಲಸೆ ಕಾರ್ಮಿಕರು, ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು ಮತ್ತು ಗೃಹ ಸಹಾಯಕರು ಸೇರಿದಂತೆ ಪಡಿತರ ಚೀಟಿಗಳನ್ನು ಹೊಂದಿರದ ಜನರಿಗೆ ಪೂರೈಸುತ್ತದೆ
  • ಈ ಯೋಜನೆಯ ಮೂಲಕ ಇಲ್ಲಿಯವರೆಗೆ 4.5 ಲಕ್ಷಕ್ಕೂ ಹೆಚ್ಚು ಜನರಿಗೆ ನೆರವು ನೀಡಲಾಗಿದೆ
Ration Card: ಈ  ರಾಜ್ಯದಲ್ಲಿ ಪಡಿತರ ಚೀಟಿ ಇಲ್ಲದಿದ್ದರೂ ರೇಷನ್ ನೀಡುತ್ತಿದೆ ಸರ್ಕಾರ title=
ಪಡಿತರ ಚೀಟಿ ಹೊಂದಿಲ್ಲದವರಿಗೂ ಐದು ಕೆಜಿ ಆಹಾರ ಧಾನ್ಯ

Delhi Government Initiative: ದೆಹಲಿಯಲ್ಲಿ ಪಡಿತರ ಚೀಟಿ ಹೊಂದಿಲ್ಲದವರಿಗೂ ದೆಹಲಿ ಸರ್ಕಾರದ (Delhi Government) ವತಿಯಿಂದ  4 ಕೆಜಿ ಗೋಧಿ ಮತ್ತು 1 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ರಾಷ್ಟ್ರ ರಾಜಧಾನಿಯಲ್ಲಿ ಹೊಸ ಯೋಜನೆಯಡಿ ಪಡಿತರ ಚೀಟಿ ಹೊಂದಿಲ್ಲದ 4.5 ಲಕ್ಷಕ್ಕೂ ಹೆಚ್ಚು ಜನರಿಗೆ ಆಹಾರ ಧಾನ್ಯಗಳನ್ನು ಒದಗಿಸಲಾಗುತ್ತಿದೆ.

ಈ ಯೋಜನೆಯಡಿ ಪಡಿತರ ಚೀಟಿ ಇಲ್ಲದವರಿಗೆ ತಮ್ಮ ಆಧಾರ್ ಕಾರ್ಡ್ (Aadhaar Card) ತೋರಿಸುವ ಮೂಲಕ ಐದು ಕಿಲೋಗ್ರಾಂಗಳಷ್ಟು ಆಹಾರ ಧಾನ್ಯಗಳನ್ನು ಪಡೆಯಲು ಅವಕಾಶ ನೀಡುತ್ತದೆ. 

ಈ ಯೋಜನೆಯು ಅಸಂಘಟಿತ ಕಾರ್ಮಿಕರು, ವಲಸೆ ಕಾರ್ಮಿಕರು, ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು ಮತ್ತು ಗೃಹ ಸಹಾಯಕರು ಸೇರಿದಂತೆ ಪಡಿತರ ಚೀಟಿಗಳನ್ನು (Ration Card) ಹೊಂದಿರದ ಜನರಿಗೆ ಪೂರೈಸುತ್ತದೆ. ಈ ಯೋಜನೆಯ ಮೂಲಕ ಇಲ್ಲಿಯವರೆಗೆ 4.5 ಲಕ್ಷಕ್ಕೂ ಹೆಚ್ಚು ಜನರಿಗೆ ನೆರವು ನೀಡಲಾಗಿದೆ ಎಂದು ದೆಹಲಿ ಸರ್ಕಾರ ತಿಳಿಸಿದೆ.

ಇದನ್ನೂ ಓದಿ - One Nation One Ration Card : ಪಡಿತರ ಚೀಟಿದಾರರಿಗೊಂದು ಸಿಹಿ ಸುದ್ದಿ..!

ಯೋಜನೆಯಡಿ ಫಲಾನುಭವಿಗಳು ತಲಾ ನಾಲ್ಕು ಕೆಜಿ ಗೋಧಿ ಮತ್ತು ಒಂದು ಕೆಜಿ ಅಕ್ಕಿ ಪಡೆಯುತ್ತಾರೆ. ಜನರಿಗೆ 5,000 ಮೆಟ್ರಿಕ್ ಟನ್ ಪಡಿತರವನ್ನು ಒದಗಿಸಲಾಗಿದ್ದು, ಇನ್ನೂ 5,000 ಮೆಟ್ರಿಕ್ ಟನ್ ವಿತರಣಾ ಕೇಂದ್ರಗಳನ್ನು ತಲುಪಲಿದೆ ಎಂದು ಹೇಳಲಾಗಿದೆ.

ಒಟ್ಟು 280 ದೆಹಲಿ ಸರ್ಕಾರಿ ಶಾಲೆಗಳು, ಪ್ರತಿ ಪುರಸಭೆಯ ವಾರ್ಡ್‌ಗಳಲ್ಲಿ ಒಂದನ್ನು ಆಹಾರ ಧಾನ್ಯಗಳ ವಿತರಣೆಗೆ ಗೊತ್ತುಪಡಿಸಲಾಗಿದೆ.

"ಮುಂದಿನ ದಿನಗಳಲ್ಲಿ ಸಂಪೂರ್ಣ ಪ್ರಕ್ರಿಯೆಯನ್ನು ಸುಗಮವಾಗಿ ಮತ್ತು ತೊಂದರೆಯಿಲ್ಲದೆ ಮಾಡಲು ವಿಷಯಗಳನ್ನು ಇನ್ನಷ್ಟು ಸುವ್ಯವಸ್ಥಿತಗೊಳಿಸಲಾಗುವುದು. ಪಡಿತರ ಜನರ ಹಕ್ಕು ಎಂದು ಆಪ್ ಸರ್ಕಾರ ನಂಬುತ್ತದೆ" ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಇಮ್ರಾನ್ ಹುಸೇನ್ ಹೇಳಿದ್ದಾರೆ.

ಇದನ್ನೂ ಓದಿ - Ration Card : ಪಡಿತರ ಚೀಟಿದಾರರಿಗೊಂದು ಗುಡ್ ನ್ಯೂಸ್..!

ಗೆಜೆಟೆಡ್ ರಜಾದಿನಗಳು ಮತ್ತು ಭಾನುವಾರಗಳನ್ನು ಹೊರತುಪಡಿಸಿ ಗೊತ್ತುಪಡಿಸಿದ ಕೇಂದ್ರಗಳಲ್ಲಿ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಪಡಿತರವನ್ನು ಪಡೆಯಬಹುದು ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News